ಬಸೆನ್ ಮುರ್ಮು (೯ ಏಪ್ರಿಲ್ ೧೯೮೭ - ೮ ಜೂನ್ ೨೦೨೦) ) ಸಂತಾಲಿ ಚಲನಚಿತ್ರ ಮತ್ತು ಆಲ್ಬಮ್ ಜಗತ್ತಿನ ಭಾರತೀಯ ಗಾಯಕ . ಬಸೆನ್ ಮುರ್ಮು ಜನಿಸಿದ್ದು ಒಡಿಶಾದ (ಭಾರತ) ಮಯೂರ್ಭಂಜ್ ಜಿಲ್ಲೆಯ ಬಿಜ್ತಾಲಾ ಬ್ಲಾಕ್‌ನ ಬರ್ಹಜಿಯಾನ್ ಗ್ರಾಮದಲ್ಲಿ. ಇವರ ತಂದೆಯ ಹೆಸರು ನರನ್ ಮುರ್ಮು ಮತ್ತು ತಾಯಿ ಮೈನಾ ಮುರ್ಮು. ಇವರ ಹೆಂಡತಿಯ ಹೆಸರು ಮಮತಾ ಮುರ್ಮು. ಭಾಗ್ಯಲಕ್ಷ್ಮಿ ಮುರ್ಮು ಇವರ ಏಕೈಕ ಪುತ್ರಿ. == ವೃತ್ತಿಜೀವನ == ಬಸೆನ್ ಮುರ್ಮು ಇವರು ತನ್ನ ಅಲ್ಪಾವಧಿಯ ಜೀವನದಲ್ಲಿ ಐನೂರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಇವರ ಸೂಪರ್ಹಿಟ್ ಹಾಡುಗಳು - "ಕುಲ್ಮಿ ಡೇರ್ ಲೆಕಾ ಕುಡಿಮ್ ಹರಾಯೆನ್", "ಚೆಮೆಕ್ ಚೆಮೆಕ್", "ಜಿವಿ ರಾಣಿ ತಿಸೀಮ್ ಹಿಜುಗ್", "ಅಲಕ್ ಜಾಡಿ ನಾಡಿ ಲೆಕಾ" ಮುಂತಾದವು. == ನಿಧನ == ಬಸೆನ್ ಮುರ್ಮು ೮ ಜೂನ್ ೨೦೨೦ ರಂದು ನಿಧನರಾದರು. ಇವರು ಕೇವಲ ೩೩ ರ ಹರೆಯವರಾಗಿದ್ದು ಇವರಿಗೆ ಯಾವುದೇ ರೋಗದ ಲಕ್ಷಣಗಳು ಇರಲಿಲ್ಲ. ಜೂನ್ ೮ ರಂದು, ಇವರು ಇದ್ದಕ್ಕಿದ್ದಂತೆ ಕುಸಿದುಬಿದ್ದರು ಮತ್ತು ಇವರನ್ನು ಚಿಕಿತ್ಸೆಗಾಗಿ ರಾಯರಂಗಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಯೇ ಇವರು ವಿಧಿವಶರಾಧರು. == ಬಾಹ್ಯ ಕೊಂಡಿಗಳು == ://.//---------33/ == ಉಲ್ಲೇಖಗಳು ==